ಅಭಿಪ್ರಾಯ / ಸಲಹೆಗಳು

ತರಬೇತಿ ಕಾರ್ಯಕ್ರಮಗಳು

ಸಿಡಾಕ್ – ಕಾರ್ಯಕ್ರಮಗಳು :

ನಮ್ಮ ಸಂಸ್ಥೆಯ ಏರ್ಪಡಿಸಿರುವ ಪ್ರಮುಖ ಕಾರ್ಯಕ್ರಮಗಳು ಕೆಳಗಿನಂತಿರುತ್ತವೆ.

 • ಉದ್ಯಮಶೀಲತೆ ಜಾಗೃತಿ ಕಾರ್ಯಕ್ರಮಗಳು (ಎಲ್ಲ ವರ್ಗದವರಿಗೆ)
 • ಉದ್ಯಮಶೀಲತೆ ಅಭಿವೃದ್ಧಿ ಕಾರ್ಯಕ್ರಮಗಳು (ಎಲ್ಲ ವರ್ಗದವರಿಗೆ)
 • ಗ್ರಾಮೀಣ ಉದ್ಯಮಶೀಲತೆ ಅಭಿವೃದ್ಧಿ ಕಾರ್ಯಕ್ರಮಗಳು (ಕಿರು/ಗ್ರಾಮೀಣ ಉದ್ಯಮ)
 • ತರಬೇತುದಾರರ ತರಬೇತಿ ಕಾರ್ಯಕ್ರಮ
 • ಬೋಧಕರ ಅಭಿವೃದ್ಧಿ ಕಾರ್ಯಕ್ರಮ
 • ವ್ಯಾಪಾರ ಅವಕಾಶಗಳ ಗುರುತಿಸುವಿಕೆ
 • ಯೋಜನಾ ವರದಿಗಳನ್ನು ತಯಾರಿಸುವುದು
 • ಸಣ್ಣ ಉದ್ದಿಮೆಗಳ ನಿರ್ಧಾರ ಕೈಗೊಳ್ಳುವ ತಂತ್ರಜ್ಞಾನ

ಕಾರ್ಯಕ್ರಮದಲ್ಲಿ ಯಾರು ಭಾಗವಹಿಸಬಹುದು :  
ವ್ಯಾಪಾರ ಅಥವಾ ಕೈಗಾರಿಕಾ ಕ್ಷೇತ್ರದಲ್ಲಿ ಯಾವ ಅನುಭವವೂ ಇಲ್ಲದ ಜೊತೆಗೆ ಕುಟುಂಬದ ಬೆಂಬಲವೂ ಇರದ ವ್ಯಕ್ತಿಗಳಿಗೆ ತರಬೇತಿ ಕಾರ್ಯಕ್ರಮಗಳನ್ನು ಸಿಡಾಕ್ ಹಮ್ಮಿಕೊಳ್ಳುತ್ತದೆ. ಪ್ರತಿನಿಧಿಗಳಿಗೆ ಅಗತ್ಯ ಮಾಹಿತಿ ಒದಗಿಸುವ ಅತ್ಯುತ್ತಮ ಕಾರ್ಯಕ್ರಮಗಳನ್ನು ವಿಶೇಷವಾಗಿ ವಿನ್ಯಾಸಗೊಳಿಸುತ್ತದೆ. ಮಧ್ಯಮ ಮಟ್ಟದ ವ್ಯವಸ್ಥಾಪಕರು, ಉಪಾಧ್ಯಾಯರು, ಲೆಕ್ಕಿಗರು, ವ್ಯಾಪಾರಸ್ಥರು, ತಾಂತ್ರಿಕ ಹಾಗೂ ತಾಂತ್ರಿಕೇತರ ವಿದ್ಯಾಸಂಸ್ಥೆಗಳ ಹೊಸ ಪದವೀಧರರೂ, ಕಸಬುದಾರರು ಶಾಲೆ ಹಾಗೂ ಕಾಲೇಜು ಶಿಕ್ಷಣದಿಂದ ವಂಚಿತರಾದವರು, ಮಹಿಳೆಯರು, ಹಿಂದುಳಿದ ವರ್ಗದವರು ಈ ಕಾರ್ಯಕ್ರಮಗಳಲ್ಲಿ ಭಾಗವಹಿಸಬಹುದಾಗಿದೆ. 

ಬೋಧಕರು : 
ಸೂಕ್ತ ಅರ್ಹತೆಗಳು ಮತ್ತು ತರಬೇತಿಯೊಂದಿಗೆ ಸಿಡಾಕ್ ಸಂಸ್ಥೆಯು ಹೆಚ್ಚಿನ ಅನುಭವಿ ಅಧ್ಯಾಪಕ ಸದಸ್ಯರನ್ನು ಹೊಂದಿದೆ. ಉದ್ಯಮ, ವ್ಯಾಪಾರ ಮತ್ತು ಸರ್ಕಾರಿ ಸಂಸ್ಥೆಗಳೊ0ದಿಗೆ ನಿಯಮಿತವಾಗಿ ಸಮಾಲೋಚಿಸಿ, ಉದ್ಯಮಶೀಲತಾ ಪ್ರೇರಣೆ, ಯೋಜನಾ ಅವಕಾಶಗಳ ಮಾರ್ಗದರ್ಶನ, ಸಣ್ಣ ಉದ್ಯಮ ನಿರ್ವಹಣೆ, ಯೋಜನಾ ನಿರ್ವಹಣೆ, ಸೂಕ್ಷ್ಮ ಉದ್ಯಮಗಳ ರಚನೆ, ಗುಂಪು ಉದ್ಯಮಶೀಲತೆ, ಯೋಜನಾ ಮೌಲ್ಯಮಾಪನ ಮತ್ತು ಸೂಕ್ಷ್ಮ ಹಣಕಾಸು ಇತ್ಯಾದಿ ಪ್ರಪಂಚದ ಇತ್ತೀಚಿನ ವಾಸ್ತವತೆಯನ್ನು ಅರಿತುಕೊಳ್ಳಲು ತರಗತಿಗಳಲ್ಲಿ ತರಬೇತಿಯನ್ನು ನೀಡುತ್ತಾರೆ.  

ಇತ್ತೀಚಿನ ನವೀಕರಣ​ : 31-05-2023 11:44 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕರ್ನಾಟಕ ಉದ್ಯಮಶೀಲತಾಭಿವೃದ್ದಿ ಕೇಂದ್ರ (ಸಿಡಾಕ್) ಧಾರವಾಡ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080