ಅಭಿಪ್ರಾಯ / ಸಲಹೆಗಳು

ಮಾಹಿತಿ ಹಕ್ಕು ಅಧಿನಿಯಮ

ಆರ್.ಟಿ.ಐ. ಅಧಿನಿಯಮ -2005, ವಿಭಾಗ 4(1)(ಅ) ಪ್ರಕಾರ :    

ಎಲ್ಲಾ ಅನ್ವಯವಾಗುವ ದಾಖಲೆಗಳನ್ನು ಸರಿಯಾದ ರೀತಿಯಲ್ಲಿ ಸೂಚಿತವಾಗಿ ಮತ್ತು ಸೂಚ್ಯಂಕದಲ್ಲಿ ಮತ್ತು ಮಾಹಿತಿ ಹಕ್ಕುಗೆ ಅನುಕೂಲವಾಗುವಂತೆ ರೂಪಿಸಲಾಗಿದೆ. ಸಾಧ್ಯವಾದಲ್ಲಿ ಈ ದಾಖಲೆಗಳನ್ನು ಗಣಕೀಕರಿಸಲಾಗಿರುತ್ತದೆ.

ಈ ಸಂಸ್ಥೆಯ ಕಾರ್ಯಗಳು ಮತ್ತು ಕರ್ತವ್ಯಗಳ ಬಗೆಗಿನ ವಿವರಗಳು : 

ಕರ್ನಾಟಕ ಉದ್ಯಮಶೀಲತಾಭಿವೃದ್ದಿ ಕೇಂದ್ರ (ಸಿಡಾಕ್), ಧಾರವಾಡ ಸಂಸ್ಥೆ ಮಾಹಿತಿ ಹಕ್ಕು ಅಧಿನಿಯಮದ ಪ್ರಕಾರ ಈ ಮೂಲ ಮಾಹಿತಿಯನ್ನು ಒದಗಿಸುತ್ತಿದೆ. ಸಿಡಾಕ್ ಬೇಲೂರು ಕೈಗಾರಿಕಾ ಪ್ರದೇಶ, ಧಾರವಾಡ-೫೮೦ ೦೧೧ ಸಂಸ್ಥೆಯು ಒದಗಿಸುತ್ತಿರುವ ಸೇವೆ, ಆಯೋಜಿಸುತ್ತಿರುವ ಚಟುವಟಿಕೆ ಹಾಗೂ ನೀಡುವ ಸೌಲಭ್ಯಗಳ ಬಗ್ಗೆ ಹೆಚ್ಚಾಗಿ ತಿಳಿದುಕೊಳ್ಳ ಬಯಸಿದ್ದಲ್ಲಿ, ದಯವಿಟ್ಟು ಸಿಡಾಕ್‌ನ ವೆಬಸೈಟ್ : cedokdwd.karnataka.gov.inನಲ್ಲಿ ನೋಡಬಹುದಾಗಿದೆ.

ಕರ್ನಾಟಕ ಉದ್ಯಮಶೀಲತಾ ಅಭಿವೃದ್ದಿ ಕೇಂದ್ರ (ಸಿಡಾಕ್) ಒಂದು ಸೊಸೈಟಿ, ಇದು ಕರ್ನಾಟಕ ಸಂಘಗಳ ಅಧಿನಿಯಮ-1960 ರ ಪ್ರಕಾರ ನೋಂದಣಿಯಾಗಿದೆ ಹಾಗೂ ಇದು ಕರ್ನಾಟಕ ಸರ್ಕಾರದ ಕೌಶಲ್ಯಾಭಿವೃದ್ದಿ, ಉದ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆಯಡಿಯಲ್ಲಿ ಕಾರ್ಯನಿರ್ವಹಿಸುತ್ತಿದೆ.

ಸಿಡಾಕ್ ಸಂಸ್ಥೆಯ ಮುಖ್ಯ ಕಾರ್ಯ/ಕರ್ತವ್ಯಗಳು ಕೆಳಗಿನಂತಿವೆ :

  1. ಉದ್ಯಮಶೀಲತಾ ಜಾಗೃತಿ ಶಿಬಿರಗಳನ್ನು ಆಯೋಜಿಸುವದು.
  2. ಉದ್ಯಮಶೀಲತಾ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸುವದು.
  3. ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ, ಇತರೆ ಇಲಾಖೆಯ/ಸಂಸ್ಥೆಯ ಅಧಿಕಾರಿ/ಸಿಬ್ಬಂದಿ ವರ್ಗದವರಿಗೆ ವಿಚಾರ ಸಂಕಿರಣ, ಕಾರ್ಯಾಗಾರಗಳನ್ನು ಆಯೋಜಿಸುವದು.

ಜನರಲ್ಲಿರುವ ಸುಪ,್ತ ಸಾಮರ್ಥ್ಯ ಹಾಗೂ ಸಂಪನ್ಮೂಲಗಳನ್ನು ಗುರುತಿಸಿ ಹಾಗೂ ಅವುಗಳನ್ನು ಹೊರಗೆಡುಹುದಕ್ಕೆ ಮತ್ತು ಅವುಗಳನ್ನು ಉಪಯೋಗಿಸಿಕೊಂಡು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಆರ್ಥಿಕವಾಗಿ ಹಾಗೂ ಸಾಮಾಜಿಕವಾಗಿ ಸಬಲರಾಗುವದಕ್ಕೆ ಶಿಕ್ಷಣವು ವ್ಯಾಪಕವಾಗಿ ಹೆಚ್ಚು ಪರಿಣಾಮಕಾರಿಯಾದ ಸಾಧನ ಎಂದು ಮಾನ್ಯ ಮಾಡಲಾಗಿದೆ. ಈ ಒಂದು ನಂಬಿಕೆ, ಧೇಯ್ಯೊದ್ದೇಶಗಳ ಆಧಾರದ ಮೇಲೆ ಸಿಡಾಕ್ ಸಂಸ್ಥೆಯು ಉದ್ಯಮಶೀಲತಾ ಅಭಿವೃದ್ದಿಗೆ ಸಂಬAಧಿಸಿದAತೆ ಕಾರ್ಯನಿರ್ವಹಿಸುತ್ತಿದೆ.

• ವ್ಯವಸ್ಥಿತವಾದ ಶಿಕ್ಷಣ ಮತ್ತು ತರಬೇತಿಯ ಮುಖಾಂತರ ಉದ್ಯಮಶೀಲರ ಸರಬರಾಜನ್ನು ವೃದ್ದಿಪಡಿಸುವದು.
• ಸ್ವಯಂ-ಉದ್ಯೋಗಗಳ ವಿಪುಲ ಅವಕಾಶಗಳನ್ನು ಸೃಷ್ಟಿಸುವದು ಹಾಗೂ ಆ ಅವಕಾಶಗಳ ಮೇಲೆ ಗುಣಕ ಪರಿಣಾಮವನ್ನುಂಟು ಮಾಡುವದು.
• ಸಣ್ಣ ಉದ್ಯಮಶೀಲರ ವ್ಯವಸ್ಥಾಪನಾ ಸಾಮರ್ಥ್ಯಗಳನ್ನು ಸುಧಾರಿಸುವದು.
• ಉದ್ಯಮಶೀಲತೆಯನ್ನು ಪ್ರಸರಣಗೊಳಿಸುವದಕ್ಕೆ ತನ್ನ ಕೊಡುಗೆಯನ್ನು ನೀಡುವುದು ಹಾಗೂ ನಗರ/ಗ್ರಾಮೀಣ ಪ್ರದೇಶದಲ್ಲಿ ವಾಸಿಸುವ ಉದ್ಯಮಶೀಲ ವರ್ಗದವರ ಸಾಮಾಜಿಕ ತಳಹದಿಯನ್ನು ವಿಸ್ತರಿಸುವದು.
• ಮೌಲ್ಯಮಾಪನ ಹಾಗೂ ನಿರ್ವಹಣಾ ಸಮೀಕ್ಷೆಗಳ ಅಧ್ಯಯನ ಕೈಗೊಳ್ಳುವದು.
• ಸಾಮಾನ್ಯ, ವಿಶೇಷವಾಗಿ ಮಹಿಳೆಯರಿಗೆ, ಪರಿಶಿಷ್ಟ ಜಾತಿ/ಪರಿಶಿಷ್ಠ ಪಂಗಡ, ಅಲ್ಪಸಂಖ್ಯಾತ ಹಾಗೂ ಹಿಂದುಳಿದ ವರ್ಗಗಳ ಜನರಿಗೆ ಉದ್ಯಮಶೀಲತಾ ಅಭಿವೃದ್ದಿ ಕಾರ್ಯಕ್ರಮಗಳನ್ನು ಆಯೋಜಿಸುವದು
• ತರಬೇತುದಾರರಿಗೆ ಹಾಗೂ ಪ್ರೇರಕರಿಗೆ ಉದ್ಯಮಶೀಲತಾಭಿವೃದ್ದಿಯ ಬಗ್ಗೆ ಹೆಚ್ಚಿನ ವಿಷಯಗಳನ್ನು ಕಲಿಯುವದಕ್ಕೆ ಮಾದರಿ ಕೇಂದ್ರವನ್ನಾಗಿ ಮಾಡುವದು.
• ಅಭಿವೃದ್ದಿ ಹೊಂದುತ್ತಿರುವ ರಾಷ್ಟçಗಳಲ್ಲಿ ಉದ್ಯಮಶೀಲತೆಯ ಸಂಸ್ಕೃತಿ, ಸ್ಪೂರ್ತಿ ಹಾಗೂ ಉದ್ಯಮಶೀಲತಾಭಿವೃದ್ದಿಯ ಬೆಳವಣಿಗೆ ಸಂಸ್ಥೆ ತನ್ನ ಕೊಡುಗೆಯನ್ನು ನೀಡುವದು.

ಕರ್ನಾಟಕ ಉದ್ಯಮಶೀಲತಾಭಿವೃದ್ದಿ ಕೇಂದ್ರ ವ್ಯಾಪಕವಾಗಿ ಆಯೋಜಿಸುತ್ತಿರುವ ವಿವಿಧ ಕಾರ್ಯಕ್ರಮಗಳು

1. ಸರ್ಕಾರದಿಂದ ಪ್ರಾಯೋಜಿತವಾದ ಯೋಜನೆಗಳ ಫಲಾನುಭವಿಗಳಿಗೆ 3 ದಿನಗಳ ಉದ್ಯಮಶೀಲತಾ ಅಭಿವೃದ್ದಿ ಕಾರ್ಯಕ್ರಮಗಳನ್ನು ಆಯೋಜಿಸುವದು.
2. ಸರ್ಕಾರದಿಂದ ಪ್ರಾಯೋಜಿತವಾದ ಯೋಜನೆಯ ಫಲಾನುಭವಿಗಳಿಗೆ 6 ಹಾಗೂ  10 ದಿನಗಳ ಉದ್ಯಮಶೀಲತಾ ಅಭಿವೃದ್ದಿ ಕಾರ್ಯಕ್ರಮಗಳನ್ನು ಆಯೋಜಿಸುವದು.
3. ತರಬೇತುದಾರರ ತರಬೇತಿ ಕಾರ್ಯಕ್ರಮಗಳನ್ನು ಆಯೋಜಿಸುವದು.
4. ಬೇರೆ ಬೇರೆ ಯೋಜನೆ ಹಾಗೂ ಅವಶ್ಯಕತೆಗಳಿಗನುಗುಣವಾಗಿ ಉದ್ಯಮಶೀಲತಾಭಿವೃದ್ದಿ, ವ್ಯಕ್ತಿತ್ವ ವಿಕಸನ, ಮಾರ್ಕೆಟಿಂಗ ಹಾಗೂ ಲಾಭಗಳಿಸುವ ಚಟುವಟಿಕೆಗಳಿಗೆ ಸಂಬಧಿಸಿದAತೆ ವಿಶೇಷವಾದ ಕಾರ್ಯಕ್ರಮಗಳನ್ನು ವಿನ್ಯಾಸಗೊಳಿಸಿ ಆಯೋಜಿಸುವದು.

ಸಂಸ್ಥೆಯ ಅಧಿಕಾರಿ ಹಾಗೂ ನೌಕರರ ಅಧಿಕಾರ ಮತ್ತು ಕರ್ತವ್ಯಗಳು :

ಈ ಸಂಸ್ಥೆಯ ದಿನ ನಿತ್ಯದ ಹಾಗೂ ಆಡಳಿತಾತ್ಮಕ ಕರ್ತವ್ಯಗಳನ್ನು ನಿರ್ವಹಿಸುವದಕ್ಕೆ “ಗೌರ್ನಿಂಗ್ ಕೌನ್ಸಿಲ್” (ಆಡಳಿತ ಮಂಡಳಿ) ಸಂಸ್ಥೆಯ ನಿರ್ದೇಶಕರಿಗೆ ಅಧಿಕಾರ ಕೊಟ್ಟಿರುತ್ತದೆ. ಸಂಸ್ಥೆಯ ಅಧಿಕಾರಿಗಳು ಮತ್ತು ನೌಕರರು ನಿರ್ದೇಶಕರ ನಿರ್ದೇಶನದ ಪ್ರಕಾರ ಕಾರ್ಯನಿರ್ವಹಿಸುತ್ತಾರೆ. ಬೇರೆ ಬೇರೆ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುವ ಅಧಿಕಾರಿಗಳು ಸಿಡಾಕ್ ಸಂಸ್ಥೆ ಅವರ ಜಿಲ್ಲೆಗೆ ವಹಿಸಿದ ಕಾರ್ಯಕ್ರಮಗಳನ್ನು ಅನುಷ್ಠಾನ ಮಾಡಬೇಕು.

ಮೇಲ್ವಿಚಾರಣೆ ಹಾಗೂ ಹೊಣೆಗಾರಿಕೆಯನ್ನು ನಿರ್ವಹಿಸುವದಕ್ಕೆ ಸಂಬAಧಿಸಿದAತೆ ತೀರ್ಮಾನ ಮಾಡುವ ಪ್ರಕ್ರಿಯೆ ಹಾಗು ಅದನ್ನು ಅನುಸರಿಸುವ ವಿಧಾನ :

ಕಾರ್ಯ ನೀತಿಗೆ ಸಂಬAಧಿಸಿದ ಪ್ರಮುಖವಾದ ತೀರ್ಮಾನವನ್ನು ಆಡಳಿತ ಮಂಡಳಿ (ಗೌರ್ನಿಂಗ ಕೌನ್ಸಿಲ್) ಕೈಗೊಳ್ಳುತ್ತದೆ. ನಿರ್ದೇಶಕರು ಸಿಡಾಕ್ ಸಂಸ್ಥೆಯ ದಿನ ನಿತ್ಯದ ಆಡಳಿತಾತ್ಮಕ ಕಾರ್ಯಗಳನ್ನು ನಿರ್ವಹಿಸುತ್ತಾರೆ. ಅವರು ಸಂಸ್ಥೆಯಿAದ ಕರ್ನಾಟಕ ರಾಜ್ಯದಾದ್ಯಂತ ಅನುಷ್ಠಾನಗೊಳಿಸುವ ಚಟುವಟಿಕೆಗಳನ್ನು ಮೇಲ್ವಿಚಾರಣೆ ಮಾಡುತ್ತಾರೆ.

ಕರ್ತವ್ಯಗಳನ್ನು ನಿರ್ವಹಿಸುವದಕ್ಕೆ ನಿಗದಿ ಪಡಿಸಿದ ವ್ಯವಸ್ಥೆ :

ಸಿಡಾಕ್ ಸಂಸ್ಥೆಯು ಆಡಳಿತ ಮಂಡಳಿ (ಗೌರ್ನಿಂಗ ಕೌನ್ಸಿಲ್)ಯ ಮಾರ್ಗದರ್ಶನದ ಪ್ರಕಾರ ಮತ್ತು ಸಿಡಾಕ್ ಸೇವಾ ನಿಯಮಗಳಲ್ಲಿ ವಿಶದ ಪಡಿಸಿದ ನಿಯಮಗಳ ಪ್ರಕಾರ ಕಾರ್ಯ ನಿರ್ವಹಿಸುತ್ತದೆ,

ಸಂಸ್ಥೆಯು ಕಾರ್ಯನಿರ್ವಹಿಸುವಾಗ ಅನುಸರಿಸುವ ನಿಯಮಗಳು, ನಿಯಂತ್ರಣ, ಸೂಚನೆಗಳು, ಕೈಪಿಡಿ ಮತ್ತು ದಾಖಲಾತಿಗಳು :

ಸಿಡಾಕ್ ಸಂಸ್ಥೆಯ ನಿಯಮಗಳು, ನಿಯಂತ್ರಣಕ್ಕೆ ಸಂಬAಧಿಸಿದ ವಿವಾದಾಂಶಗಳನ್ನು ಬಗೆಹರಿಸುವದಕ್ಕೆ ಸಾಮಾನ್ಯವಾಗಿ ಮೆಮೋರಾಂಡಮ್ ಅಸೋಸಿಯೇಶನ ಹಾಗೂ ಆಡಳಿತ ಮಂಡಳಿ (ಗೌರ್ನಿಂಗ ಕೌನ್ಸಿಲ್) ಕಾಲ ಕಾಲಕ್ಕೆ ತೆಗೆದುಕೊಂಡ ನಿರ್ಧಾರಗಳ ಪ್ರಕಾರ ಕಾರ್ಯನಿರ್ವಹಿಸುತ್ತದೆ.

ಸಿಡಾಕ್ ಸಂಸ್ಥೆಯು ತನ್ನ ಆಧೀನದಲ್ಲಿ ಅಥವಾ ತನ್ನ ನಿಯಂತ್ರಣದಲ್ಲಿ ಹೊಂದಿರುವ ದಾಖಲಾತಿ/ಪಟ್ಟಿಯ ವಿಧಗಳು :

ಕಾರ್ಯಕ್ರಮಕ್ಕೆ ಸಂಬAಧಿಸಿದ ಭೋಧನಾ ಸಾಮಗ್ರಿ, ಉದ್ಯಮಶೀಲತಾಭಿವೃದ್ದಿಗೆ ಸಂಬAಧಿಸಿದ ಪುಸ್ತಕಗಳು ಮತ್ತು ಕೈಪಿಡಿಗಳು.

ಸಾರ್ವಜನಿಕ ಸದಸ್ಯರ ಪ್ರಾತಿನಿಧ್ಯ ಅಥವಾ ಸಮಾಲೋಚನೆಗೆ ಸಂಸ್ಥೆಯಲ್ಲಿ ಈಗ ಚಾಲ್ತಿಯಲ್ಲಿರುವ ವ್ಯವಸ್ಥೆಯ ವಿವರಗಳು :

ಸಂಸ್ಥೆಗೆ ಸಲಹೆ ಸೂಚನೆಗಳನ್ನು ನೀಡುವದಕ್ಕಾಗಿ ಎರಡು ಅಥವಾ ಹೆಚ್ಚಿನ ಸದಸ್ಯರನ್ನೊಳಗೊಂಡ ಆಡಳಿತ ಮಂಡಳಿ, ಸಮಿತಿಗಳು ಉಪ ಸಮಿತಿಗಳು ಮತ್ತು ಇತರೆ ಮಂಡಳಿಗಳು ಮತ್ತು ಈ ಆಡಳಿತ ಮಂಡಳಿ, ಸಮಿತಿಗಳು, ಉಪಸಮಿತಿಗಳು ಹಾಗೂ ಇತರೆ ಮಂಡಳಿಗಳಿAದ ನಡೆಸಲಾದ ಸಭೆಯ ನಡುವಳಿಗಳು ಸಾರ್ವಜನಿಕರ ಅವಗಾಹನೆ ಮುಕ್ತವಾಗಿವೆ (ಆರ್.ಟಿ.ಐ.ಅಧಿನಿಯಮ-೨೦೦೫ರ ವಿಭಾಗ ೪(೧)(ಬಿ)(viii) ರ ಅನ್ವಯ)
ಸಿಡಾಕ್ ಸಂಸ್ಥೆಯ ಆಡಳಿತ ಮಂಡಳಿ (ಗೌರ್ನಿಂಗ ಕೌನ್ಸಿಲ್) ಹಾಗೂ ಸದಸ್ಯರ ವಿವರಗಳು ಈ ಕೆಳಗಿನಂತಿವೆ.

1. ಸರ್ಕಾರದ  ಅಪರ ಮುಖ್ಯ ಕಾರ್ಯದರ್ಶಿಗಳು,
ಕೌಶಲ್ಯಾಭಿವೃದ್ದಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ,
ಮತ್ತು ಅಧ್ಯಕ್ಷರು, ಸಿಡಾಕ್,
2ನೇ ಗೇಟ್, ೩ನೇ ಮಹಡಿ, ಎಮ್.ಎಸ್. ಕಟ್ಟಡ,
ಡಾ. ಬಿ. ಆರ್. ಅಂಬೇಡ್ಕರ ವೀಧಿ,
ಬೆಂಗಳೂರು – 560001.

2. ಆಯುಕ್ತರು,
ನಿರ್ದೇಶಕರು, ಸೂಕ್ಷö್ಮ, ಸಣ್ಣ ಮತ್ತು ಮಧ್ಯಮ ಉದ್ದಿಮೆಗಳು
ನಂ. 49, ಎರಡನೇ ಮಹಡಿ, ದಕ್ಷಿಣ ಬ್ಲಾಕ್,
ಖನಿಜ ಭವನ, ರೇಸ್ ಕೋರ್ಸ ರಸ್ತೆ,
ಬೆಂಗಳೂರು – 560 001.

3. ವ್ಯವಸ್ಥಾಪಕ ನಿರ್ದೇಶಕರು,
ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ದಿ ನಿಗಮ ಲಿ,
ರಾಜಾಜಿನಗರ ಕೈಗಾರಿಕಾ ವಸಾಹತು,
ಬೆಂಗಳೂರು – 560 004.

4. ಆಯುಕ್ತರು (ಉದ್ಯೋಗ ಮತ್ತು ತರಬೇತಿ),
ಕೌಶಲ್ಯ ಭವನ, ಡೇರಿ ಸರ್ಕಲ್,
ಮೊದಲನೇ ಭವನ, ಬನ್ನೇರಘಟ್ಟ ರಸ್ತೆ,
ಬೆಂಗಳೂರು – 560 029.

5. ಪ್ರಧಾನ ನಿರ್ದೇಶಕರು,
ರಾಷ್ಟಿçÃಯ ಉದ್ಯಮಶೀಲತೆ ಸಣ್ಣ ವ್ಯಾಪಾರ ಅಭಿವೃದ್ದಿ ಸಂಸ್ಥೆ,
ಎ-23, ಸೆಕ್ಟರ್ 62, ದೆಹಲಿಯ ಎನ್.ಸಿ.ಆರ್.
ನೋಯಿಡಾ, ಉತ್ತರ ಪ್ರದೇಶ – 110 016

6. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ಮುಖ್ಯ ಸಲಹೆಗಾರರು,
ಕರ್ನಾಟಕ ತಾಂತ್ರಿಕ ಸಲಹಾ ಸೇವಾ ಸಂಸ್ಥೆ,
ಜಿಲ್ಲಾ ಕೈಗಾರಿಕಾ ಕೇಂದ್ರ, ಬೆಂಗಳೂರು (ಗ್ರಾಮೀಣ), ಕಚೇರಿ ಕಟ್ಟಡ,
ಕೆಳಮಹಡಿ, 1ನೇ ಕ್ರಾಸ್, ರಾಜಾಜಿನಗರ ಕೈಗಾರಿಕಾ ವಸಾಹತು,
ಬೆಂಗಳೂರು – 560 044.

7. ವ್ಯವಸ್ಥಾಪಕ ನಿರ್ದೇಶಕರು,
ಕರ್ನಾಟಕ ರಾಜ್ಯ ಕೈಗಾರಿಕಾ ಬಂಡವಾಳ ಅಭಿವೃದ್ದಿ ನಿಗಮ,
4ನೇ ಮಹಡಿ, ಖನಿಜ ಭವನ, ನಾರ್ಥ ವಿಂಗ್,
ರೇಸ್ ಕೋರ್ಸ ರಸ್ತೆ,
ಬೆಂಗಳೂರು – 560 001.

8. ಆಯುಕ್ತರು,
ಸಮಾಜ ಕಲ್ಯಾಣ ಇಲಾಖೆ,
5ನೇ ಮಹಡಿ, ಎಮ್. ಎಸ್. ಕಟ್ಟಡ,
ಡಾ. ಬಿ. ಆರ್. ಅಂಬೇಡ್ಕರ ವೀಧಿ,
ಬೆಂಗಳೂರು – 560 001.

9. ನಿರ್ದೇಶಕರು,
ಕರ್ನಾಟಕ ಉದ್ಯಮಶೀಲತಾಭಿವೃದ್ದಿ ಕೇಂದ್ರ, 
ಪ್ಲಾಟ್ ಸಂಖ್ಯೆ (ಎ ಮತ್ತು ಬಿ),
ಬೇಲೂರು ಕೈಗಾರಿಕಾ ಪ್ರದೇಶ,
ಬೆಂಗಳೂರು – 560 001.

ಸಿಡಾಕ್ ಸಂಸ್ಥೆಯ ಅಧಿಕಾರಿ ಮತ್ತು ನೌಕರರ ಕೋಶ (ಆರ್.ಟಿ.ಐ.ಅಧಿನಿಯಮ-2005 ರ ವಿಭಾಗ 4(1)(ಬಿ)(ix) ರ ಅನ್ವಯ):


1. ನಿರ್ದೇಶಕರು : 01 - ಸಿಡಾಕ್ ಸಂಸ್ಥೆಯ ಖಾಯಂ ನೌಕರರು
2. ಜಂಟಿ ನಿರ್ದೇಶಕರುಗಳು : 10 - ಸಿಡಾಕ್ ಸಂಸ್ಥೆಯ ಖಾಯಂ ನೌಕರರು
3. ಹಿರಿಯ ಸಹಾಯಕ ನಿರ್ದೇಶಕರು : 01 - ಸಿಡಾಕ್ ಸಂಸ್ಥೆಯ ಖಾಯಂ ನೌಕರ.
4. ಅಧೀಕ್ಷಕರು : 01 - ಸಿಡಾಕ್ ಸಂಸ್ಥೆಯ ಖಾಯಂ ನೌಕರ.
5. ಕಾರ್ಯನಿರ್ವಾಹಕರು : 04 - ಸಿಡಾಕ್ ಸಂಸ್ಥೆಯ ಖಾಯಂ ನೌಕರರು.
6. ಗ್ರಂಥ ಪಾಲಕರು : 01 - ಸಿಡಾಕ್ ಸಂಸ್ಥೆಯ ಖಾಯಂ ನೌಕರ.
7. ಕಿರಿಯ ಕಾರ್ಯನಿರ್ವಾಹಕರು : 01 - ಸಿಡಾಕ್ ಸಂಸ್ಥೆಯ ಖಾಯಂ ನೌಕರ.
8. ಹಿರಿಯ ಸಹಾಯಕರು : 02 - ಸಿಡಾಕ್ ಸಂಸ್ಥೆಯ ಖಾಯಂ ನೌಕರರು
9. ಸಹಾಯಕ : 01 - ಸಿಡಾಕ್ ಸಂಸ್ಥೆಯ ಖಾಯಂ ನೌಕರ.
10. ಕಿರಿಯ ಸಹಾಯಕ : 02 - ಸಿಡಾಕ್ ಸಂಸ್ಥೆಯ ಖಾಯಂ ನೌಕರ.

ಸಂಸ್ಥೆಯ ಪ್ರಾರಂಭದಿAದ ಕಾರ್ಯನಿರ್ವಹಿಸಿದ ಮುಖ್ಯಸ್ಥರ ವಿವರಗಳು : 

ಅ) ಸಂಸ್ಥೆಯ ನಿರ್ದೇಶಕರ ಅಧಿಕಾರಾವಧಿಯ ವಿವರಗಳು : (ಐ.ಬಿ. ವಿಭಾಗ) (ದಿನಾಂಕ 01.07.2020 ರ ವರೆಗೆ)
• ಶ್ರೀ. ಜಿ. ಎಸ್. ಪರಂಜ್ಯೋತಿ.
• ಶ್ರೀ. ಜಿ. ಶಿವನಾಯಕ್.
• ಶ್ರೀ. ಅಬ್ದುಲ್ ಕಯ್ಯುಂ
• ಶ್ರೀ. ಅನೀಲ ಉಪ್ಪಿನ
• ಡಾ. ಶಾಲಿನಿ ರಜನೀಶ, ಐ.ಎ.ಎಸ್.
• ಶ್ರೀ. ಬಸವರಾಜ, ಐ.ಎ.ಎಸ್.
• ಶ್ರೀ. ಜಿ. ನಾಗರಾಜು.
• ಶ್ರೀ. ನಾಗವೇಂದ್ರ ಸ್ವಾಮಿ.
• ಶ್ರೀ. ಎಮ್. ಜೆ. ಜೀವಣ್ಣವರ.
• ಶ್ರೀ. ಅನೀಲ ಉಪ್ಪಿನ.
• ಶ್ರೀ. ಎಮ್. ವಿ. ಅಳಗವಾಡಿ.
• ಶ್ರೀ. ಬಿ. ಎಸ್. ರೇವಣಕರ.
• ಶ್ರೀ. ವೀರಣ್ಣ ಎಸ್. ಎಚ್.
• ಶ್ರೀ. ಎಮ್. ಜೆ. ಜೀವಣ್ಣವರ.
• ಶ್ರೀ. ಎಚ್. ಎಸ್. ಪ್ರಕಾಶ.
• ಶ್ರೀ. ವೀರಣ್ಣ ಎಸ್. ಎಚ್.
• ಶ್ರೀ. ಎಮ್. ಜೆ. ಜೀವಣ್ಣವರ.
• ಶ್ರೀ. ಬಿ. ಎಮ್. ಗೋಟೂರ
• ಶ್ರೀ. ವೀರಣ್ಣ ಎಸ್. ಎಚ್.

• ಶ್ರೀ. ಬಿ. ಎಮ್. ಗೋಟೂರ

ಬ) ಬಹುಕಾರ್ಯಕ ಸಿಬ್ಬಂದಿ (ದಿನಾಂಕ 01.07.2020 ರ ವರೆಗೆ)

ಕ) ಸಿ.ಎಸ್.ಎಸ್.ಎಸ್. ಸಿಬ್ಬಂದಿಯ ವಿವರಗಳು (ದಿನಾಂಕ 01.07.2020 ರ ವರೆಗೆ)

ಸಂಸ್ಥೆಯ ಸೇವಾಯ ನಿಯಮಗಳಲ್ಲಿ ಅಳವಡಿಸಿದ ಪರಿಹಾರ ವ್ಯವಸ್ಥೆಯ ಪ್ರಕಾರ ಪ್ರತಿಯೊಬ್ಬ ಅಧಿಕಾರಿ/ನೌಕರರು ಸ್ವೀಕರಿಸುವ ಪ್ರತಿ ತಿಂಗಳ ಸಂಭಾವನೆ (ಆರ್.ಟಿ.ಐ.ಅಧಿನಿಯಮ-2005 ರ ವಿಭಾಗ 4(1)(ಬಿ)(x) ರ ಅನ್ವಯ):

1. ನಿರ್ದೇಶಕರು : ಮೂಲವೇತನ ರೂ. 117700
2. ಜಂಟಿ ನಿರ್ದೇಶಕರುಗಳು : ರೂ. 82000
3. ವ್ಯವಸ್ಥಾಪಕರು (ಹಣಕಾಸು ಮತ್ತು ಲೆಕ್ಕ) : ರೂ. 80100
4. ಹಿರಿಯ ಸಹಾಯಕ ನಿರ್ದೇಶಕರು : ರೂ. 53900
5. ಅಧೀಕ್ಷಕರು :  ರೂ. 50150
6. ಕಾರ್ಯನಿರ್ವಾಹಕರು :  ರೂ. 47650 
7. ಗ್ರಂಥಪಾಲಕರು :  ರೂ. 45300  
8. ಕಿರಿಯ ಕಾರ್ಯನಿರ್ವಾಹಕರು :  ರೂ. 38850 
9. ಹಿರಿಯ ಸಹಾಯಕರು :  ರೂ. 36950 
10. ಸಹಾಯಕ :  ರೂ. 33450
11. ಕಿರಿಯ ಸಹಾಯಕರು :  ರೂ. 19500

ಸಂಸ್ಥೆಯ ಎಲ್ಲ ಯೋಜನೆಯ ಅಭ್ಯರ್ಥಿಗಳಿಗೆ ಸಂಬAಧಿಸಿದAತೆ, ಪ್ರತಿಯೊಂದು ಸಂಸ್ಥೆಗೆ ಹಂಚಿಕೆ ಮಾಡಿದ ಬಜೆಟ್ ಮೊತ್ತ ಹಾಗೂ ಪ್ರಸ್ತಾವಿತ ಖರ್ಚು ಮತ್ತು ಬಜೆಟ್ ಮೊತ್ತವನ್ನು ವಿತರಿಸಿದ ವರದಿ ನಮೂದಿಸುವದು (ಆರ್.ಟಿ.ಐ.ಅಧಿನಿಯಮ-2005ರ ವಿಭಾಗ 4(1)(ಬಿ)(xi) ರ ಅನ್ವಯ)
-

ಮೊತ್ತವನ್ನು ಹಂಚಿಕೆ ಮಾಡಿದ ವಿವರಗಳನ್ನೊಳಗೊಂಡ ಸಹಾಯಧನ ನೀಡುವ ಕಾರ್ಯಕ್ರಮಗಳನ್ನು ಅನುಷ್ಠಾನ ಮಾಡಿದ ವಿಧಾನ ಮತ್ತು ಆ ಕಾರ್ಯಕ್ರಮಗಳ ಫಲಾನುಭವಿಗಳ ವಿವರಗಳು (ಆರ್.ಟಿ.ಐ.ಅಧಿನಿಯಮ-2005 ರ ವಿಭಾಗ 4(1)(ಬಿ)(xii) ರ ಅನ್ವಯ)
-

ರಿಯಾಯಿತಿಗಳನ್ನು ಸ್ವೀಕರಿಸಿದ ಫಲಾನುಭವಿಗಳ ವಿವರಗಳು, ಮತ್ತು ಅವುಗಳನ್ನು ಮಂಜೂರು ಮಾಡಲು ಅನುಮತಿ ಅಥವಾ ಅನುಮೋದನೆ ನೀಡಿದ ಪ್ರಾಧಿಕಾರದ ವಿವರಗಳು. (ಆರ್.ಟಿ.ಐ.ಅಧಿನಿಯಮ-2005ರ ವಿಭಾಗ 4(1)(ಬಿ)(xiii) ರ ಅನ್ವಯ)
-

ಲಭ್ಯವಿರುವ ಮಾಹಿತಿಯನ್ನು ಹೊಂದಿದ ವಿವರಗಳು ಅಥವಾ ಸದರಿ ಮಾಹಿತಿಯನ್ನು ಕಡಿಮೆಗೊಳಿಸಿದ ವಿದ್ಯುನ್ಮಾನ (ಇಲೆಕ್ಟಾçನಿಕ್) ರೂಪದಲ್ಲಿ ವಿಶದಪಡಿಸಿದ್ದು. (ಆರ್.ಟಿ.ಐ.ಅಧಿನಿಯಮ-2005 ರ ವಿಭಾಗ 4(1)(ಬಿ)(xiv) ರ ಅನ್ವಯ)

-

ಒಂದು ವೇಳೆ ಸಾರ್ವಜನಿಕರ ಉಪಯೋಗಕ್ಕಾಗಿ ತೆರೆದಿಟ್ಟಿದ್ದಲ್ಲಿ, ನಾಗರಿಕರು ಮಾಹಿತಿಯನ್ನು ಪಡೆಯುವದಕ್ಕೆ ಸಂಸ್ಥೆಯಲ್ಲಿ ಲಬ್ಯವಿರುವ ಸೌಲಭ್ಯಗಳ ವಿವರಗಳು, ಕಾರ್ಯನಿರ್ವಹಿಸುವ ವೇಳೆಯನ್ನೊಳಗೊಂಡ ಗ್ರಂಥಾಲಯ, ಓದುವ ಕೊಠಡಿ ಸೌಲಭ್ಯ ಇತ್ಯಾದಿ. (ಆರ್.ಟಿ.ಐ.ಅಧಿನಿಯಮ- 2005 ರ ವಿಭಾಗ 4(1)(ಬಿ)(xv)ದ ಅನ್ವಯ)

ಸಂಸ್ಥೆಯಲ್ಲಿ ಗ್ರಂಥಾಲಯ ಸೌಲಭ್ಯವಿದೆ, ಇದು ಮುಂಜಾನೆ 10.30 ರಿಂದ ಸಂಜೆ 5.30 ರ ವರೆಗೆ ಕಾರ್ಯನಿರ್ವಹಿಸುತ್ತದೆ.

ಸಾರ್ವಜನಿಕ ಮಾಹಿತಿ ಅಧಿಕಾರಿಯ ಹೆಸರು, ಪದನಾಮ ಮತ್ತು ಇತರೆ ಅಭ್ಯರ್ಥಿಗಳು (ಆರ್.ಟಿ.ಐ.ಅಧಿನಿಯಮ-2005 ರ ವಿಭಾಗ 4(1)(ಬಿ)(xvi)ದ ಅನ್ವಯ)

ಶ್ರೀ. ಅಶೋಕ ಎಸ್, ನ್ಯಾಮಗೌಡರ, ವ್ಯವಸ್ಥಾಪಕರು (ಸಿಬ್ಬಂದಿ ಮತ್ತು ಆಡಳಿತ)

ಇತರ ಯಾವುದೇ ನಿಗದಿತ ಮಾಹಿತಿಯಿದ್ದಲ್ಲಿ ಅದನ್ನು ನಮೂದಿಸುವದು. (ಆರ್.ಟಿ.ಐ.ಅಧಿನಿಯಮ-2005 ರ ವಿಭಾಗ 4(1)(ಬಿ)(xvii)ದ ಅನ್ವಯ)
-

ಇತ್ತೀಚಿನ ನವೀಕರಣ​ : 30-04-2024 01:10 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕರ್ನಾಟಕ ಉದ್ಯಮಶೀಲತಾಭಿವೃದ್ದಿ ಕೇಂದ್ರ (ಸಿಡಾಕ್) ಧಾರವಾಡ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080