ಅಭಿಪ್ರಾಯ / ಸಲಹೆಗಳು

ನಮ್ಮ ಬಗ್ಗೆ

ಹಿನ್ನಲೆ :

ಕರ್ನಾಟಕ ಉದ್ಯಮಶೀಲತಾಭಿವೃದ್ಧಿ ಕೇಂದ್ರ (ಸಿಡಾಕ್) ಧಾರವಾಡ, ಸಂಸ್ಥೆಯು ದಿನಾಂಕ : ೧೫.೦೫.೧೯೯೨ ರಂದು ನೋಂದಣಿಯಾಗಿರುತ್ತದೆ. ಪ್ರಸ್ತುತವಾಗಿ ಕರ್ನಾಟಕ ಸರ್ಕಾರದ ಉತ್ತೇಜನೆದೊಂದಿಗೆ ಸಂಸ್ಥೆಯು ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆಯ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿದೆ.

ದೃಷ್ಟಿ :

ಉದ್ಯಮಶೀಲತೆಯ ಶಿಕ್ಷಣ / ತರಬೇತಿಯಲ್ಲಿ ಶ್ರೇಷ್ಠತೆಯ ಕೇಂದ್ರ ಮತ್ತು ಉದ್ಯಮಶೀಲತೆಯ ಅವಕಾಶಗಳಿಗಾಗಿ ಸಂಶೋಧನೆ ಮತ್ತು ಯೋಜನಾ ಮಾರ್ಗದರ್ಶನಕ್ಕಾಗಿ ಸಂಪನ್ಮೂಲ ಕೇಂದ್ರವಾಗುವುದು.


ಕಾರ್ಯಗೌರವ :

ಉದ್ಯಮಿಗಳು ಅಗತ್ಯವಾಗಿ ಹುಟ್ಟಬೇಕಾಗಿಲ್ಲ ಎಂಬ  ನಂಬಿಕೆಯೊAದಿಗೆ ಉದ್ಯಮಶೀಲತಾ ಆಂದೋಲನವನ್ನು ಮುನ್ನಡೆಸುತ್ತಿರುವ ಸಂಸ್ಥೆಯಾಗಿದೆ. ಉದ್ಯಮಶೀಲತೆ ತನಗೆತಾನೇ ಜನಿಸುತ್ತದೆಂದು ನಂಬದೆ, ಅದನ್ನು ಸೂಕ್ತ ನಿರ್ದೇಶಿತ ಚಟುವಟಿಕೆಯ ಮೂಲಕ, ಪರಿಣತತರಬೇತಿ ಹಾಗೂ ಅಭಿವೃದ್ಧಿ ಪಡಿಸುವದರೊಂದಿಗೆ ಗಳಿಸಬಹುದೆಂದು ಸಂಸ್ಥೆ ಪೂರ್ಣ ಭರವಸೆ ಹೊಂದಿದೆ. ಮನುಷ್ಯನ ಸಾಮರ್ಥ್ಯ ಹಾಗೂ ಸಂಪನ್ಮೂಲವನ್ನು ಬೆಳಕಿಗೆ ತರಲು, ಶಿಕ್ಷಣ ಪರಿಣಾಮಕಾರಿ ಅಸ್ತç ಎಂದು ವ್ಯಾಪಕವಾಗಿ ಗುರುತಿಸಿರುವ ಹಿನ್ನೆಲೆಯಲ್ಲಿ ಸಿಡಾಕ್, ಕೆಳಕಂಡ ಕಾರ್ಯಗೌರವಗಳನ್ನು ಹೊಂದಿರುತ್ತದೆ.

•  ಶಿಕ್ಷಣ ಹಾಗೂ ತರಬೇತಿಯ ಮೂಲಕ ಉದ್ಯಮಶೀಲತೆಯನ್ನು ಅಧಿಕಗೊಳಿಸುವುದು.
•  ಸ್ವ-ಉದ್ಯೋಗ ಅವಕಾಶಗಳನ್ನು ಗುಣಾತ್ಮಕವಾಗಿ ಪರಿಚಯಿಸುವುದು.
•  ಸಣ್ಣ ಪ್ರಮಾಣದ ಉದ್ದಿಮೆದಾರರ ನಿರ್ವಹಣಾ ಸಾಮರ್ಥ್ಯವನ್ನು ಸುಧಾರಿಸುವುದು.
•  ಉದ್ಯಮಶೀಲತೆಯನ್ನು ವ್ಯಾಪಕವಾಗಿ ಪಸರಿಸುವಲ್ಲಿ ನೆರವಾಗುವುದು. ಅಂತೆಯೇ ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಉದ್ಯಮಶೀಲತೆಯ ನೆಲೆಗಟ್ಟನ್ನು ವೃದ್ಧಿಸುವುದು.
•  ಉದ್ಯಮಶೀಲತೆಯ, ಪಠ್ಯ ಹಾಗೂ ಪ್ರಯೋಗಗಳ ಜ್ಞಾನ ಹಾಗೂ ಅಂತ:ಸತ್ವವನ್ನು, ಸಂಶೋಧನೆಯ ಮೂಲಕ ಸೃಷ್ಟಿಸುವುದು ಹಾಗೂ ಪ್ರಚಾರ ಪಡಿಸುವುದು.
•  ಉದ್ಯಮಶೀಲತೆಯ ಅಭಿವೃದ್ಧಿಗೆ ತರಬೇತುದಾರರು ಹಾಗೂ ಮನವೊಲಿಸುವವರನ್ನು ಸೃಷ್ಠಿಸುವುದು. 


ಕೇಂದ್ರವು ರಾಜ್ಯವ್ಯಾಪ್ತಿಯಲ್ಲಿ ಪ್ರತಿಷ್ಠಿತ ಸ್ಥಾನವನ್ನು ಗಳಿಸಿಕೊಂಡಿದೆ ಹಾಗೂ ಪ್ರಸ್ತುತ ಆರಂಭಿಕ ಉತ್ಸಾಹಿ ಉದ್ಯಮಶೀಲರಿಗೆ, ಮೌಲ್ಯಭರಿತ ಹಾಗೂ ಉದ್ಯಮಶೀಲಾಭಿವೃದ್ಧಿ ಕಾರ್ಯಕ್ರಮಗಳನ್ನು ರಚನಾತ್ಮಕ ಆಗೂ ನಿಗದಿತ ರೀತ್ಯ ನೀಡುತ್ತಿದೆ.

ಸಿಡಾಕ್ ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಜಂಟಿ ನಿರ್ದೇಶಕರು/ಉಪ ನಿರ್ದೇಶಕರುಗಳನ್ನು ಹೊಂದಿದ್ದು; ಅವರು ಪೂರ್ಣಾವಧಿ ತರಬೇತಿ ನೀಡುವ ಹಾಗೂ ಉದ್ಯಮಶೀಲತೆಗೆ ಮನವೊಲಿಸುವ ಕಾರ್ಯನಿರ್ವಹಿಸುತ್ತಿದ್ದಾರೆ. ಸಂಸ್ಥೆಯ ಜಂಟಿ ನಿರ್ದೇಶಕರು/ಉಪ ನಿರ್ದೇಶಕರುಗಳು ಕಾರ್ಯಕ್ರಮ ಸಹಾಯಕರೊಂದಿಗೆ ಉದ್ಯಮಶೀಲರಿಗೆ ಅಗತ್ಯ ಮಾಹಿತಿಕೊಂಡೊಯ್ಯುವ ಹಾಗೂ ಉದ್ಯಮವನ್ನು ಯಶಸ್ವಿಯಾಗಿ ಆರಂಭಿಸುವವರೆಗೆ ಸಹಾಯಹಸ್ತ/ಬೆಂಬಲ ಸೇವೆೆ ನೀಡುವ ಕಾರ್ಯಗಳನ್ನು ನಿರ್ವಹಿಸುತ್ತಿದ್ದಾರೆ.

ಈ ಕೇಂದ್ರ, ಸಮನ್ವಯತೆಯ ಕಾರ್ಯನೀತಿಗೆ ಒತ್ತು ನೀಡುವುದು ಗುಂಪು ಸಮಾವೇಶದಲ್ಲಿ ಪ್ರತಿನಿಧಿಗಳು ಒಬ್ಬರೊಂದಿಗೆ ಒಬ್ಬರು ನೇರ ಮಾತುಕತೆ ನಡೆಸಲು ಅವಕಾಶ ಕಲ್ಪಿಸುತ್ತದೆ. ವಿಷಯ ತಜ್ಞರು ಹಾಗೂ ಅಧಿಕಾರಿಗಳು ಸೂಕ್ತ ಸಲಹೆ ನೀಡುವುದರಲ್ಲಿ ಆಸಕ್ತರಾಗಿರುತ್ತಾರೆ. ಅನುಭವ ಫಲಕಾರಿಯಾಗಲು ಸಹಕರಿಸುತ್ತಾರೆ. ತರಗತಿಗಳ ವ್ಯಾಪ್ತಿಯನ್ನು ಮೀರಿ ಉದ್ಯಮಶೀಲಾಸಕ್ತರಿಗೆ ಎಷ್ಟರ ಮಟ್ಟಿಗೆ ಹೆಚ್ಚಿನ ಉಪಯೋಗವಾಗುವಂತೆ ಕಾರ್ಯಕ್ರಮ ವ್ಯವಸ್ಥೆ ಮಾಡಬಹುದೆಂದು ಸಿಡಾಕ್ ಸದಾ ಆಲೋಚಿಸುತ್ತದೆ. ಹಾಗೂ ಅಂಥ ಕಾರ್ಯಕ್ರಮಗಳನ್ನು ಅತಿಶಯವಾಗಿ ವ್ಯವಸ್ಥೆ ಮಾಡುತ್ತದೆ.

ಬಹುವ್ಯಾಪ್ತಿಯ ಕಾರ್ಯಕ್ರಮಗಳು :

•  ಉದ್ಯಮಶೀಲತೆ ಜಾಗೃತಿ ಕಾರ್ಯಕ್ರಮಗಳು (ಎಲ್ಲ ವರ್ಗದವರಿಗೆ)
•  ಉದ್ಯಮಶೀಲತೆ ಅಭಿವೃದ್ಧಿ ಕಾರ್ಯಕ್ರಮಗಳು (ಎಲ್ಲ ವರ್ಗದವರಿಗೆ)
•  ಗ್ರಾಮೀಣ ಉದ್ಯಮಶೀಲತೆ ಅಭಿವೃದ್ಧಿ ಕಾರ್ಯಕ್ರಮಗಳು (ಕಿರು/ಗ್ರಾಮೀಣಉದ್ಯಮ)
•  ತರಬೇತುದಾರರ ತರಬೇತಿ ಕಾರ್ಯಕ್ರಮ
•  ಬೋಧಕರ ಅಭಿವೃದ್ಧಿ ಕಾರ್ಯಕ್ರಮ
•  ವ್ಯಾಪಾರ ಅವಕಾಶಗಳ ಗುರುತಿಸುವಿಕೆ ಹಾಗೂ ಯೋಜನಾ ವರದಿಗಳನ್ನು ತಯಾರಿಸುವ ಕುರಿತು ಕಾರ್ಯಕ್ರಮ.
•  ಸಣ್ಣ ಉದ್ದಿಮೆಗಳ ನಿರ್ಧಾರ ಕೈಗೊಳ್ಳುವ ತಂತ್ರಗಳ ಕುರಿತು ಕಾರ್ಯಕ್ರಮ.
•  ಕುಶಲಕರ್ಮಿಗಳಿಗಾಗಿ ನಿರ್ವಹಣಾ ಮೆಚ್ಚುಗೆ ಕಾರ್ಯಕ್ರಮ
•  ಸರ್ಕಾರಿ ಇಲಾಖೆಗಳ ಹಾಗೂ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳ ಅಧಿಕಾರಿ/ಸಿಬ್ಬಂದಿ ಸಾಮರ್ಥ್ಯ ಅಭಿವೃದ್ಧಿ ಕಾರ್ಯಕ್ರಮ

ಕಾರ್ಯಕ್ರಮದಲ್ಲಿ ಯಾರು ಭಾಗವಹಿಸಬಹುದು :

ವ್ಯಾಪಾರ ಅಥವಾ ಕೈಗಾರಿಕಾ ಕ್ಷೇತ್ರದಲ್ಲಿ ಯಾವ ಅನುಭವವೂ ಇಲ್ಲದ ಜೊತೆಗೆ ಕುಟುಂಬದ ಬೆಂಬಲವೂ ಇರದ ವ್ಯಕ್ತಿಗಳಿಗೆ ತರಬೇತಿ ಕಾರ್ಯಕ್ರಮಗಳನ್ನು ಸಿಡಾಕ್ ಹಮ್ಮಿಕೊಳ್ಳುತ್ತದೆ. ಪ್ರತಿನಿಧಿಗಳಿಗೆ ಅಗತ್ಯ ಮಾಹಿತಿ ಒದಗಿಸುವ ಅತ್ಯುತ್ತಮ ಕಾರ್ಯಕ್ರಮಗಳನ್ನು ವಿಶೇಷವಾಗಿ ವಿನ್ಯಾಸಗೊಳಿಸುತ್ತದೆ. ಮಧ್ಯಮ ಮಟ್ಟದ ವ್ಯವಸ್ಥಾಪಕರು, ಉಪಾಧ್ಯಾಯರು, ಲೆಕ್ಕಿಗರು, ವ್ಯಾಪಾರಸ್ಥರು, ತಾಂತ್ರಿಕ ಹಾಗೂ ತಾಂತ್ರಿಕೇತರ ವಿದ್ಯಾಸಂಸ್ಥೆಗಳ ಹೊಸ ಪದವೀಧರರೂ, ಕಸಬುದಾರರು, ಶಾಲೆ ಹಾಗೂ ಕಾಲೇಜು ಶಿಕ್ಷಣದಿಂದ ವಂಚಿತರಾದವರು, ಮಾಜಿ ಯೋಧರು ಹಾಗೂ ಮಹಿಳೆಯರು ಈ ಕಾರ್ಯಕ್ರಮಗಳಲ್ಲಿ ಭಾಗವಹಿಸಬಹುದಾಗಿದೆ. ಸರ್ಕಾರಿ ಇಲಾಖೆಗಳ ಹಾಗೂ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳ ಅಧಿಕಾರಿ/ಸಿಬ್ಬಂದಿಗಳಿಗೆ ಸಾಮಥ್ಯಾಭಿವೃದ್ಧಿ/ನಿರ್ವಹಣಾಭಿವೃದ್ಧಿ ಕಾರ್ಯಕ್ರಮಗಳನ್ನೂ ಸಹ ಸಂಸ್ಥೆಯು ಹಮ್ಮಿಕೊಳ್ಳುತ್ತದೆ.

ಶಿಕ್ಷಣ ಹಾಗೂ ಕಲಿಕೆ ವಾತಾವರಣ  :

ಆವರಣ :

ಗ್ರಾಮೀಣ ಪ್ರದೇಶದಲ್ಲಿ ಮತ್ತು ವಿಸ್ತಾರವಾದ ಸುತ್ತಮುತ್ತಲಿನ ಮಧ್ಯದಲ್ಲಿ ಸ್ಥಾಪಿಸಲಾದ ಸಿಡಾಕ್ ಆವರಣವನ್ನು ಸರಳವಾಗಿ ಮತ್ತು ಸೊಗಸಾದ ರಚನೆಯೊಂದಿಗೆ ಕಲಾತ್ಮಕವಾಗಿ ವಿನ್ಯಾಸಗೊಳಿಸಲಾಗಿದೆ. ಕಟ್ಟಡಗಳನ್ನು ಒಳ ಪ್ರಾಂಗಣಗಳ ಸುತ್ತಲೂ ಅಭಿವೃದ್ಧಿಪಡಿಸಲಾಗಿದೆ, ಇದು ಗಾಳಿ ಮತ್ತು ಬೆಳಕಿನ ಯಥೇಚ್ಛ ಲಭ್ಯತೆಗೆ ಪ್ರಮುಖ ಮೂಲವಾಗಿದೆ.

ಬೋಧಕರು :

ಸೂಕ್ತ ಅರ್ಹತೆಗಳು ಮತ್ತು ತರಬೇತಿಯೊಂದಿಗೆ ಸಿಡಾಕ್ ಸಂಸ್ಥೆಯು ಹೆಚ್ಚಿನ ಅನುಭವಿ ಅಧ್ಯಾಪಕ ಸದಸ್ಯರನ್ನು ಹೊಂದಿದೆ. ಉದ್ಯಮ, ವ್ಯಾಪಾರ ಮತ್ತು ಸರ್ಕಾರಿ ಸಂಸ್ಥೆಗಳೊAದಿಗೆ ನಿಯಮಿತವಾಗಿ ಸಮಾಲೋಚಿಸಿ, ಉದ್ಯಮಶೀಲತಾ ಪ್ರೇರಣೆ, ಯೋಜನಾ ಅವಕಾಶ ಮಾರ್ಗದರ್ಶನ, ಸಣ್ಣ ಉದ್ಯಮ ನಿರ್ವಹಣೆ, ಯೋಜನಾ ನಿರ್ವಹಣೆ, ಸೂಕ್ಷö್ಮಉದ್ಯಮ ರಚನೆ, ಗುಂಪು ಉದ್ಯಮಶೀಲತೆ, ಯೋಜನಾ ಮೌಲ್ಯಮಾಪನ ಮತ್ತು ಸೂಕ್ಷö್ಮ ಹಣಕಾಸು ಇತ್ಯಾದಿ ವಿಷಯಗಳ ನೈಪುಣ್ಯತೆಯನ್ನು ಸಂಸ್ಥೆಯ ಅಧಿಕಾರಿ/ಸಂಪನ್ಮೂಲ ವ್ಯಕ್ತಿಗಳನ್ನು ಹೊಂದಿದ್ದು ಇವರೆಲ್ಲರೂ ಅತ್ಯಂತ ಪರಿಣಾಮಕಾರಿಯಾಗಿ ವಿಷಯ ಬೋಧನೆಯೊಂದಿಗೆ ಪ್ರಪಂಚದ ಇತ್ತೀಚಿನ ವಾಸ್ತವತೆಯನ್ನು ಅರಿತುಕೊಳ್ಳಲು ತರಗತಿಗಳಲ್ಲಿ ತರಬೇತಿಯನ್ನು ನೀಡುತ್ತಾರೆ.

ಇತ್ತೀಚಿನ ನವೀಕರಣ​ : 19-12-2022 10:54 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕರ್ನಾಟಕ ಉದ್ಯಮಶೀಲತಾಭಿವೃದ್ದಿ ಕೇಂದ್ರ (ಸಿಡಾಕ್) ಧಾರವಾಡ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080